ಸತ್ಯವನ್ನೇ ಹೇಳುತ್ತೇನೆ.. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಸಾಕ್ಷಾತ್ ಪಕ್ಕದಲ್ಲಿರೋ ಈ ಭಗವದ್ಗೀತೆಯ ಮೇಲೆ ಕೈ ಇರಿಸಿ ಪ್ರಮಾಣೀಕರಿಸುತ್ತೇನೆ.. ಹಾಳಾದ್ದು.. ಬರಿತಿರೋದು ರಾಘವ [ರಾಮ]ನ ಬಗ್ಗೆ.. ಪ್ರಮಾಣ ಮಾಡ್ತಿರೋದು ಭಗವದ್ಗೀತೆ ಮೇಲೆ. ನನ್ನಂತೋನು ಭಗವದ್ಗೀತೆ ಇಟ್ಟಿರೋದೆ ದೊಡ್ ವಿಷ್ಯ ಹೇಳಿ..!! ಇನ್ ರಾಮಾಯಣ ಇಟ್ಕೋಳೋ ರಾಮಾಯಣ ಯಾಕೆ ಅಲ್ವುರಾ..?? ಸೂಕ್ತ ಸಾಕ್ಷಾಧಾರ ಗಳಿಲ್ಲದ ಈ ಅಪರಿಸ್ತಿಥಿ ಯಲ್ಲಿ ಬರೆಯಲು ಕೂತ ಭಂಡತನಕ್ಕೆ ಮನವಿ ಕೋರುತ್ತ [ಕೊರೆಯುತ್ತಾ] ನಮ್ ರಾಘವನ ಕುರಿತ ಕೆಲವು [ಬೊಗಳೆ]ಮಾತುಗಳನ್ನು ಹೇಳ[ಬೊಗಳ]ಲಿದ್ದೇವೆ ಮನ್ನಿಸಿ.. ;) ;)
ವಿ.ಸೂ: ದಯವಿಟ್ಟು ಇದನ್ನ ಈ ಕಡೆ ಕಿವಿಯಲ್ಲಿ ಕೇಳಿ.. ಆ ಕಡೆ ಕಿವಿಯಲ್ಲಿ ಬಿಟ್ಟು ಬಿಡಬೇಕಾಗಿ ಕಡ್ಡಾಯವಾಗಿ ವಿನಂತಿಸಿ ಕೊಳ್ಳುತ್ತಿದ್ದೇವೆ..!!
ಕ್ರಿಸ್ತ ಶಕ 2011 ರ ಈಚೆಗೆ ಸುಮಾರು ನಾಲ್ಕೈದು ತಿಂಗಳುಗಳ ಹಿಂದೆ ಆರ್ಕುಟ್ ಎಂಬ ಕ್ಯಾಮೆ ಇಲ್ಲದ ಮಂದಿ ಕೂತು ಹರಟುವ ಅರಳೀ ಮರದ ಯೋಗ್ಯತೆಗೆ ಸರಿಸಮನಾಗಿ ಸರಿ ತೂಗುವ ಸಾಮಾಜಿಕ ಅಂತರ್ಜಾಲದ ತಾಣದಲ್ಲೊಮ್ಮೆ.. ರಾಘವ ಚಂದ್ರ ಎಂಬ ಅರ್ಧ ಹಿಂದೆ ಅರ್ಧ ಕನ್ನಡ ಹೆಸರು ಬೆರೆತ ಈ ಶಂಕಿತ ಆಸಾಮಿಯನ್ನು ಕಂಡಂದೇ ಮೊದಲು ನನಗನ್ನಿಸಿದ್ದು.. ಇದು ಖಡಾ ಖಂಡಿತ ನಮ್ ಪೂಜ್ಯ ಸಮಾನ, ಗುರುಗಳ ಸಮಾನಾರಾದ ಯೋಗರಾಜ ಭಟ್ಟರ ನಖಲೀ ಖಾತೆ ಇರಬಹುದೇನೋ ಎಂಬ ಶಂಕೆ..!!! ಯಾಕಂದ್ರೆ ನೂರಕ್ಕೆ ತೊಂಭತ್ತು ಭಾಗ ನಮ್ ಭಟ್ಟರದ್ದೇ ಅನ್ನಬಹುದಾದಷ್ಟು ಸಾಮ್ಯತೆಯ ಮಾತುಗಳನ್ನು ನುಡಿವ ಈ ಅಸಾಮಿಯ ಮಾತುಗಳನ್ನ ನೋಡಿದ ಪ್ರತಿಯೊಬ್ಬನಿಗೂ.. ನಮ್ ಊರಿನ ಅಗಸೆ ಬಾಗಿಲಾಣೆಯಾಗೂ ಹೇಳ್ತೀನಿ ಇಂತಹದ್ದೊಂದು ಅನುಮಾನ ಹುಟ್ಟದೆ ಹೋದಲ್ಲಿ ಆ ಅನುಮಾನಕ್ಕೆ ಪೆದ್ದ ರೋಗ ಎಂಬ ಅನರ್ಥ.. ಅಲ್ಲಲ್ಲ ಅನ್ವರ್ಥ ನಾಮ ಇಟ್ಟದ್ದೆ ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇನೆ..!!
ನಾವ್ಗಳೂ ಭಟ್ಟರ ಅಭಿಮಾನಿಗಳೇ ಹೇಳಿ.. ಅವರ ಹಾಡುಗಳನ್ನು ಆರಾಧಿಸುವ.. ಅವರ ಡೈಲಾಗ್ಸ್ ಗಳನ್ನು ಆನಂದಿಸುವ.. ಅವರ ನಿರ್ದೇಶನವನ್ನು ಅಭಿಮಾನಿಸುವ.. ಅವರ ಕಥೆಗಳನ್ನು ಕನಸಲ್ಲೂ ಕನವರಿಸಿ ಅಭಿನಂದಿಸುವ ವಡ್ಡ ಪಡ್ಡೆ ಹುಡುಗರ ಪೈಕಿ.. ಸ್ವಲ್ಪ ಡೀಸೆಂಟ್ ಆಗಿ ಕಾಣಿಸ್ಕೊಂಡು ನೋಡಿದವರ ಕಣ್ಣಿಗೆ ನೋಡ್ತಿದ್ದ ಹಾಗೆ ವಡ್ಡರಿವರೆನ್ನುವ ಹಾಗೆ ತೋರಗೊಡದ ಮಹಾನ್ ಭಂಡ ಹುಡುಗರೂ ಅನ್ನಿ ತಪ್ಪೇ ಇಲ್ಲ.. ;) ;)
ಹುಮ್ಮ್.. ಸಿನಿಮಾ ನೋಡಲು ಥಿಯೇಟರ್ ನತ್ತ ದಾಪುಗಾಲು ಹಾಕೋದಿರ್ಲಿ.. ಸಿನಿಮಾ ಪೋಸ್ಟರ್ ಗಳನ್ನೂ ತಲೆ ಎತ್ತಿ ನೋಡದ ನನ್ನಂತೋನು ಒಂದೇ ತಿಂಗಳಲ್ಲಿ ಒಂದೇ ಸಿನಿಮಾ ವನ್ನ ಬರೋಬ್ಬರಿ ಏಳು ಸಾರಿ ನೋಡುವಂತೆ ಮಾಡಿ.. ಅಷ್ಟು ಬಾರಿ ನೋಡಿಸಿಯೂ.. ನನ್ ಸಿನಿಮಾ ನೋಡುವ ತೃಷೆಯನ್ನು ಇಂಗಿಸಲಾರದ ನತದೃಷ್ಟ ನಿರ್ದೇಶಕರ ಸಾಲಿಗೆ ಸೇರುವ ಈ ಕಾಲದ ಏಕೈಕ ಜೀವವೇ ನಮ್ ಭಟ್ಟರದ್ದು.. ಆ ಚಿತ್ರ ಯಾವ್ದು ಅಂದ್ರಾ..?? ಅದೇ ಕಣ್ರೀ.. ಭಟ್ಟರ ಜೀವನದ ಅತಿ ದೊಡ್ಡ ಅಟ್ಟರ್ ಫ್ಲಾಪ್ ಸಿನಿಮಾ ನಮ್ ಮುಂಗಾರು ಮಳೆ..!!
ಏನಿತ್ತಪ್ಪಾ ಅಂಥಾದ್ದು ಆ ಸಿನಿಮಾದಲ್ಲಿ..?? ಅದು ತಲೆಕೆಟ್ಟು ಥಿಯೇಟರ್ ನಲ್ಲಿ ಏಳು ಸಾರಿ ಪ್ಲಸ್ ಟೀವಿಯಲ್ಲಿ ಲೆಕ್ಕವಿಲ್ಲದಷ್ಟು ಸಾರಿ ನೋಡಿಯೂ.. ಆಯಪ್ಪ ಆ ಸಿನಿಮಾದಲ್ಲಿ ಅದೇನ್ ಇಟ್ಟಿದ್ದ ಅಂತ.. ಅದು ಮಾಡಿದ ಗಿಮಿಕ್ ಏನೂ ಅಂತ ಅರ್ಥ ಆಗದೇನೆ ಏಳು ಪ್ಲಸ್ ಲೆಕ್ಕವಿಲ್ಲದಷ್ಟು ಸಾರಿ ಆ ಚಿತ್ರವನ್ನ ಮತ್ತೆ ಮತ್ತೆ ನೋಡುವಂತೆ ಮಾಡಿದ ಅಮೋಘ ಇತಿಹಾಸ ಆ ಸಿನಿಮಾದ್ದು ನಮ್ ಬದುಕ್ ನಲ್ಲಿ.
ಸಿಂಪಲ್ ಬಿಡಿ ಯಾರನ್ನ ಕೇಳಿದರೂ ಹೇಳ್ತಾ ಇದ್ದದ್ದು ಇದೇ ಮಾತುಗಳನ್ನ..!! ಮೊದಲನೇದಾಗಿ ಆ ಸಿನಿಮಾದ ಹಾಡುಗಳು.. ಆಯಪ್ಪನ ಬಾಯಿಗೆ ಮೊದಲನೇ ಲಾಡು ಬಿದ್ದದ್ದೇ ಆ ಹಾಡುಗಳಿಂದ. ಏನ್ ಹಾಡುಗಳ್ರೀ ಅವು..?? ದೂಸ್ರಾ ಮಾತೆ ಬೇಡ.. ಎಂಥಾ ಕಿವುಡನಿಗೂ ಇಷ್ಟವಾಗ ಬಲ್ಲ ಅನ್ ವರ್ಣಿಸಬಲ್ ಹಾಡುಗಳವು!! ಇನ್ನು ಆಯಪ್ಪನ ಬಾಯಿಗೆ ಬಿದ್ದ ಎರಡನೇ ಲಾಡು ಅಂದ್ರೆ ಆ ಚಿತ್ರದ ಡೈಲಾಗ್ಸ್. ಹಿರಿಯರಿಂ ಕಿರಿಯರ ತನಕ ಎಲ್ಲರೂ ಚಪ್ಪರಿಸಿ ಉಗಿದ ಮಾವಿನ ಕಾಯಿ ಉಪ್ಪಿನ ಕಾಯಿಯ ಗೊರಟೆ ಯಂಥಾ ಡೈಲಾಗ್ಸ್.. :) :) ಒಂದಷ್ಟು ದಿನ ಆ ಡೈಲಾಗ್ ಗಳ ಪರಿಣಾಮ ಹೇಗಿತ್ತಂದ್ರೆ.. ಪ್ರತಿ ಜನರ ಪ್ರತಿ ಗಣದ ಪ್ರತಿ ಮನದ ಆಂತರಿಕ ಮಾತುಗಳೆನ್ನುವಷ್ಟು ಮೋಡಿ ಮಾಡಿದ ಡೈಲಾಗ್ ಗಳವು.!!
ಇದಕ್ಕೂ ಮೊದ್ಲು ಮಣಿ, ರಂಗ [SSLC ] ಮಾಡಿದ್ದ ಭಟ್ಟರನ್ನ ಕ್ಯಾರೆ ಅನ್ನದೋರೆಲ್ಲಾ .. ಧಿಡೀರ್ ಅಂತ ಯೇ ಕೌನ್ ರೆ ಅಂತ ಮೂಗು, ಬಾಯಿ, ತಲೆ, ಕೆನ್ನೆ.. ಇನ್ನೂ ಸಿಕ್ ಸಿಕ್ಕ ಕಡೆ ಕೈ ಇಟ್ಕೊಂಡು ಯೋಚನೆ ಮಾಡೋ ಲೆವೆಲ್ ಗೆ ಕರಾಮತ್ತು ತೋರ್ಸೇ ಬಿಟ್ರು ನೋಡಿ ಮುಂಗಾರು ಮಳೆಯೊಳಗೆ ನಮ್ ಭಟ್ರು..!! ಆ ಮಳೆಗೆ ನೆನೆಯದವರಿಲ್ಲ.. ಆ ಹಾಡುಗಳ ಗುನುಗದವರಿಲ್ಲ.!! ಇನ್ನು ಆ ಕತೆ ಬಗ್ಗೆ ಹೇಳೋ ಹಾಗೆ ಇಲ್ಲ..ಸರಾಸರಿ ಎಲ್ಲಾ ಹುಡುಗರ ಜೀವಮಾನದ ಕತೆಯೇ.. ಅದರ ಪ್ರೋಸೆಸ್ಸ್ ಬೇರೆ, ಪ್ರೋಗ್ರೆಸ್ ಬೇರೆ ಆದರೆ ರಿಸಲ್ಟ್ ಮಾತ್ರ ಒಂದೇ..!!
ಕತೆ, ಹಾಡು, ಡೈಲಾಗ್ಸ್ & ಗಣೇಶನ ಅಭಿನಯ.. ದೃಶ್ಯಗಳ ಸುಂದರ ಚಿತ್ರೀಕರಣ ಇದಿಷ್ಟನ್ನೂ ಬಿಟ್ಟೂ ಅದಿನ್ನೇನೋ ಇದೇ ಕಣ್ರೀ ಅದರೊಳಗೆ.. ಬಡ್ಡಿ ಮಗಂದು ಈಗ್ಲೂ ನಮ್ ಕಲ್ಪನೆಗೆ ನಿಲುಕ್ತಾ ಇಲ್ಲ..!! ಇಂತಿಪ್ಪ ಭಟ್ರು ಮುಂದೆ ಮುಟ್ಟಿದ್ದೆಲ್ಲಾ ಚಿನ್ನವೇ.. ದಿಗಂತ್ ನ ತಗೊಂಡು ಹೋಗಿ ದಿಗಂತದಲ್ಲಿ ಕೂರಿಸಿ ಬಿಟ್ರು.. ನಮ್ ಭಟ್ರು.!! ಅದನ್ನ ನೋಡಿದ್ರೆ ಗೊತ್ತಾಗಲ್ವಾ ನಮ್ ಭಟ್ಟರ ಕೈ ಚಳಕ ಎಂಥಾದ್ದು ಅಂತ. ಗಾಳಿ ಪಟ, ಮನಸಾರೆ, ಪಂಚರಂಗಿ.. ಇದೆಲ್ಲ ಅದರದ್ದೇ ಚೌಕಟ್ಟಿನಲ್ಲಿ.. ಅದರದ್ದೇ ಆಯಾಮ ಗಳಲ್ಲಿ ಜನರನ್ನ ರಂಜಿಸಿ ಹಿಟ್ ಅನಿಸಿದಂಥಾ ಸಿನಿಮಾಗಳು.. ತೀರಾ ಈಚೆಯ ಪರಮಾತ್ಮ ಕೂಡ.. ಪುನೀತ್ ಹೆಸರಿಗಂಟಿಹ ಯಶಸ್ಸಿನ ಶಿಖರದಂಚು ತಲುಪಬಲ್ಲ ಹಿಟ್ ಅಲ್ಲದ್ದಿದ್ದರೂ.. ಭಟ್ಟರನ್ನ ಇಷ್ಟ ಪಡುವ ಮಂದಿಗೆ ಭಟ್ಟರಿಂದ ಸಿಗ ಬೇಕಿದ್ದೆಲ್ಲವ ಕೊಟ್ಟ ಸಿನಿಮಾ ಅದು ಕೂಡಾ..!! ಇನ್ನು ಡ್ರಾಮ ಈ ವರ್ಷದ ಅತಿ ದೊಡ್ಡ ಹಿಟ್ ಅನ್ನಿಸಿಕೊಲ್ಲಬಲ್ಲ ಚಿತ್ರ ಡ್ರಾಮ.. ಹಾಡುಗಳಿಂದ ಹಿಡಿದು.. ಡೈಲಾಗ್ಸ್.. ಡ್ರಾಮಾಟಿಕ್ ತಿರುವುಗಳು. ಪಾತ್ರಧಾರಿಗಳ ಆಕ್ಟಿಂಗ್.. ಅಲ್ಲಲ್ಲಿ ಹೌದು ಅನ್ನಿಸೋ, ತೀರಾ ಸಿಂಪಲ್ ಸಿಂಪಲ್ ಅನ್ನಿಸೋ ದೊಡ್ಡ ದೊಡ್ಡ ಸತ್ಯಗಳು.. ಟೋಟಲಿ ಹಿಟ್ ಅಷ್ಟೇ. ಯಶ್ ಗೆ ಖಂಡಿತ ಜೀವ ಕೊಟ್ಟ ಹೆಸರು ಕೊಟ್ಟ ಸಿನಿಮಾ.
ಇಂತಿಪ್ಪ ಭಟ್ಟರ ಅಮೋಘ ಅಭಿಮಾನಿಯಾದ ನಾವ್ಗಳು.. ಅವರ ಮತ್ತೋರ್ವ ಅತ್ಯದ್ಭುತಪೂರ್ವಭಿಮಾನಿ ರಾಘವರನ್ನು ನೋಡಿದ ಮೇಲೆ ನಮ್ಮೊಳಗೆ ಭಟ್ಟರ ಮೇಲೆ ಸಣ್ಣ ಮತ್ಸರದ ಬೀಜ ಬಿದ್ದು ಮೊಳಕೆಯೊಡೆದು ಮರವಾಗಿ ಬೆಳೆದದ್ದು ಯಾಕೆ ಅಂತ ಗೊತ್ತಾಗಿರಲಿಕ್ಕಿಲ್ಲ ನಿಮಗೆ.. ಹೇಳ್ತೀನಿ ಕೇಳಿ..!!
ಅಲ್ಲಾ ನಾವ್ಗಳು ಕೂಡ ಅವರ ಕಟ್ಟಾ ಅಭಿಮಾನಿ ಗಳೇ.. ಹಾಡುಗಳ ಅರಾಧಕರೆ.. ಮಾತುಗಳಿಗೆ ಮಸೋತವರೆ..!! ಆದ್ರೆ ಈಚೀಚೆಗೆ ಭಟ್ಟರು ಬರೆದದ್ದು ಯಾವ್ದು.. ರಾಘವ ಬರೆದದ್ದು ಯಾವ್ದು ಅಂತ ನಮ್ಮನ್ನ ನಾವೇ ಕನ್ಫ್ಯೂಷಿಯಸ್ ಲೆವೆಲ್ ಗೆ ಕನ್ಫ್ಯೂಸ್ ಮಾಡೋ ಆ ಬರಹಗಳು & ಅಂಥಾ ಬರಹಗಳನ್ನ ಬರೀ ರಾಘವನಿಂದ ಮಾತ್ರ ಬರೆಸ ಬಹುದಾದಂಥ ಒಂದು ಅತಿರಿಕ್ತ ವರವನ್ನ ಬರೀ ರಾಘವನಿಗೆ ಮಾತ್ರ ಕೊಟ್ಟ ಭಟ್ರು,, ನಮಗೆಲ್ಲ ತೀರಾ ಮೋಸ ಮಾಡಿ ಬಿಟ್ರು[ಅನ್ನಿಸ್ತಿದೆ]..!! ನಾವೆಲ್ಲಾ ಅವರ ಅಭಿಮಾನಿಗಳು ಅಂದ್ಮೇಲೆ.. ಎಲ್ರು ಒಂದೇ ಥರ ತಾನೇ ಇರ್ಬೇಕು..?? ಇದೇನು ಒಂದ್ ಕಣ್ಣಿಗೆ ಸುಣ್ಣ.. ಒಂದ್ ಕಣ್ಣಿಗೆ ಬೆಣ್ಣೆ ಹಚ್ಚೋದೇ ನಮ್ ಭಟ್ರು.. ;) ;) ಯಾಕಂದ್ರೆ ಭಟ್ಟರೇ ಬರೆದರೇನೋ ಅನ್ನಿಸುವಷ್ಟು.. ಭಟ್ಟರನ್ನ ಆವಾಹಿಸಿಕೊಂಡೇ ಬರೆದರೇನೋ ಅನ್ನುವಷ್ಟು ಎಫೆಕ್ಟ್ ನ ಆ ಚುರುಮುರಿ ಬರಹಗಳನ್ನ ಕಂಡ ನಮ್ಮಂತ ಭಟ್ಟರ ಅಭಿಮಾನಿ ಓದುಗರ ಹೊಟ್ಟೆಯೊಳಗಿನ [ಹೊಟ್ಟೆ ಉರಿಯ] ಸಂಕಟ ಹೊಟ್ಟೆಯೊಳಗೆ ನಿಲ್ಲದೆ ಹೊರ ಬರ್ತಾ ಇರೋ ಪರಿ ಇದು..!! ನಿಮಗೆ ಹೊಗೆ ಹೊರಗೆಲ್ಲೂ ಕಾಣಿಸಿರ್ಲಿಕ್ಕಿಲ್ಲ.. ಆದ್ರೆ ಒಳಗಡೆ ಧಗೆ ಮಾತ್ರ ಆರ್ತಾ ಇಲ್ಲ..!!
ರಾಘವ ಈಗ ತೊಡೆ ತಟ್ಟಿ ಹೇಳ್ತೀನಿ ಕೇಳು .. ಹೌದು ನೀನಂದ್ರೆ ನನಗೆ ಒಂದಿಡೀ ರಾಜ್ಯವನ್ನ ಸುಟ್ಟು ಹಾಕೋ ಅಷ್ಟು ಹೊಟ್ಟೆ ಉರಿ.. ನಿನ್ ಬರಹ ಗಳನ್ನ ಕಂಡ್ರೆ.. :) :) ನೀನೇನಾದ್ರೂ ಹುಡುಗಿ ಆಗಿದ್ದಿದ್ರೆ ಬಹುಷಃ ಮಂಡಿಯೂರಿ ರೋಸ್ ಕೊಡ್ತಿದ್ದೆ.. ಹುಡುಗ ಆಗಿ ಹುಟ್ಟಿ ಬಿಟ್ನಲ್ಲ ಆ ತಪ್ಪಿಗೆ ನಿನ್ ಮುಂದೆ ನಿಂತು ಬರೀ ಪೋಸ್ ಕೊಡೋಕಷ್ಟೇ ಸಾಧ್ಯ.. ನಗಬೇಡ.. ಹೊಟ್ಟೆ ಉರಿ ಇನ್ನು ಜಾಸ್ತಿ ಆಗ್ತಾ ಇದೇ..!!
ರಾಘು ನೀನು ಬರೆಯೋದೆಲ್ಲ ನಿನ್ ರಗಳೆಗಳಾ..?? ಅಥವಾ ಭಟ್ಟರ ಬರವಣಿಗೆ ಎದುರು ನೀನ್ ನಿಂತು ಸಾರ್ತಾ ಇರೋ ರಣ ಕಹಳೆ ಗಳಾ ಅನ್ನೋದೇ ದೊಡ್ಡ ಅನುಮಾನ..?? ಅದು ನಿಜಾನೆ.. ತೀರಾ ಇತ್ತೀಚಿಗೆ ನಮ್ ಭಟ್ರು ಸ್ವಲ್ಪ ಸೋತಿದಾರೆ ಅನ್ನಿಸ್ತು [ಅನ್ಸೋದೆನು ನಿಜಾನೆ..!!]. ಆದ್ರೆ ಈಗ ಹೇಳ್ತೀನಿ ಇದರಲ್ಲಿ ಸಮ್ ತಿಂಗ್ ಸಮ್ ತಿಂಗ್ ಇದೇ.. ಯಾರದೋ ಕೈವಾಡ ಇದೇ.. ಅವ್ರು ಸೋಲ್ತಿಲ್ಲ.. ಸೋಲಿಸ್ಪಡ್ತಾ ಇದಾರೆ!! ಇದರ ಪರಿಣಾಮ ವಾಗಿ ನೀನೇನಾದ್ರೂ ಮುಂದೆ ಭಟ್ಟರ ಥರ ದೊಡ್ಡ ವ್ಯಕ್ತಿ ಆದ್ಯೋ ನಾವ್ ಸುಮ್ನಿರೋಲ್ಲ ನೋಡು.. ;) ;) ;)
ರಾಘು ನಿನ್ ಬ್ಲಾಗ್ ನೋಡಿದೆ.. ಹೊಟ್ಟೆ ಉರಿ ತಡೆಯೋಕಾಗದ ನೋವಲ್ಲಿ ಇಷ್ಟುದ್ದ ಬರೆದು ಬಿಟ್ಟೆ ಕ್ಷಮೆ ಇರಲಿ.. ;) ;) ಏನ್ ಬರಿತಿಯಪ್ಪ..!! ಅಬ್ಭಾ.. ಅಲ್ಲಿ ಇಲ್ಲಿ ಆಗೊಂದು ಈಗೊಂದು ನೀನ್ ಹಾಕೋ ಸಣ್ಣ ಸಣ್ಣ ಕಾಮೆಂಟ್ಸ್ ಗೇನೇ ನಿನ್ ಮೇಲೆ ಹೊಟ್ಟೆ ಉರಿ ಬೆಳೆಸ್ಕೊಂಡು ಮುಚ್ಚಿಟ್ಕೊಂಡು ಹಲ್ಕಿರಿತಾ ಮಾತಾಡ್ತಿದ್ದ ನನಗೆ.. ನಿನ್ ಬ್ಲಾಗ್ ತೋರ್ಸಿ.. ಎಲ್ಲೋ ಸಣ್ಣಗೆ ಹೋಗೆ ಆಡ್ತಿದ್ದ ಹೊಟ್ಟೆ ಉರಿಯ ಹೋಗೆ ಧಿಡೀರ್ ಅಂತ ಕಾಡ್ಗಿಚ್ಚಿನ ಲೆವೆಲ್ ಗೆ ವಿಸ್ತರಿಸಿದ ನಿನ್ ಬರಹ ಕಂಡು ಇನ್ನೇನು ಹೇಳೋಕಾಗ್ದೆ ತೆಪ್ಪಗೆ ಕೂರೋದೊಂದೇ ನಮ್ ಪಾಲಿಗೆ ಈಗ ಉಳ್ಕೊಂಡಿರೋ ಕೆಲಸ.. Awsome ರಾಘು.. ನಿನ್ ಬರಹಗಳು ಮೈಂಡ್ blowing .. ನಾನ್ ನಿಜವಾಗಲು ಸಂತೋಷ ಪಡ್ತೀನಿ.. To have a Friend like U. :) ಅಡ್ಡ ಬಿದ್ದೆ ಧಣೀ ನಿನ್ ಪಾಂಡಿತ್ಯಕ್ಕೆ.. ಏನೋ ಬಡುವ್ರು ಅಲ್ಲೋ ಇಲ್ಲೋ ತಿಳೀದೇ 2 ಮಾತು ದೊಡ್ಡದಾಗಿ ಆಡಿದ್ರೆ ಉಗುಳಿನ ಜೊತೆ ಹಾಗೆ ನುಂಗಿ ಕೊಂಡು ಅನ್ನೋದು ಅನ್ನೋದು ನಮ್ಮ ಮನವಿ..
ವೆಲ್.. ಹಸ್ಕೊಂಡವನ ಎದುರು ಪಂಚ ಪರಮಾನ್ನ ಇಟ್ಟಂಗೆ ಇಟ್ಟೆ ನೋಡು ನಿನ್ ಬ್ಲಾಗ್ ನ.. ಭಟ್ರು ಕನಸಲ್ಲಿ ಬಂದದ್ದು & ನಮ್ ಭಾವ ಸಿಂಚನ ಕುರಿತಾದ ಎರಡೂ ಬರಹಗಳೂ.. ಈಗ್ಲೂ ಅನ್ ಬಿಲೀವಬಲ್ ಅದನ್ನ ನೀನೇನಾ ಬರದಿದ್ದಾ ಅಂಥಾ..?? ನೆನಪಿರಲಿ ಇನ್ಮೇಲೆ ಇದೇ ಥರದ ಊಟ ಹಾಕೋದಿದ್ರೆ ಮಾತ್ರ ಊಟ ಹಾಕು.. ಇಲ್ದಿದ್ರೆ ನಿಮ್ಮನೆ ಊಟವೇ ಬೇಡ ಅಷ್ಟೇ.. :) :)
ಎಲ್ಲಾದ್ರು ಬಾಯ್ತಪ್ಪಿ.. ಆಯಾ ತಪ್ಪಿ.. ಮನಸಿನ ಹಿಡಿತ ತಪ್ಪಿದ ಮಾತುಗಳು ಕಂಡು ಬಂದಿದ್ದಲ್ಲಿ ಕ್ಷಮೆ ಇರಲಿ ರಾಘವ.. ಬರವಣಿಗೆಯ ರಭಸದಲ್ಲಿ ಅಲ್ಲಿ ಇಲ್ಲಿ ಎಡವಿರಬಹುದು ಕ್ಷಮೆ ಇರಲಿ.. ನಿನ್ನಿಂದ ಇನ್ನು ಹೆಚ್ಚೆಚ್ಚು ಬರಹಗಳ ನಿರೀಕ್ಷೆಯಲ್ಲಿಹ ನಿನ್ನ ನಿರಂತರಾನಂತಪೂರ್ವ ಅಭಿಮಾನಿ..
- ಸತೀಶ್ ನಾಯ್ಕ್
ಭದ್ರಾವತಿ.
ಮಾತುಗಳನ್ನ ಸರಾಗವಾಗಿ ಪದಕ್ಕಿಳಿಸಿ ಬಿಡೋ ಅಪರೂಪದ ಪ್ರತಿಭೆ ರಾಘವ ಚಂದ್ರನ ಬಗ್ಗೆ ಸುಮಾರು ಐದಾರು ತಿಂಗಳ ಹಿಂದೆ ರಾಘವನಿಗೆ ನಾ ಬರೆದ ಸಣ್ಣ ಪತ್ರವಿದು. ನೀವೊಮ್ಮೆ ಅವನ ಬರಹಗಳನ್ನ ಕಂಡದ್ದೇ ಆದರೆ ಖಂಡಿತ ನಿಮ್ ಕೈಲಿ ಅವನನ್ನ ಇಷ್ಟ ಪಡದೆ ಇರೋಕೆ ಸಾಧ್ಯವೇ ಇಲ್ಲ. ಅಷ್ಟು ಕ್ಯಾಚೀ & ಸಿಹಿ ಸಿಹಿಯ ಬರವಣಿಗೆ ಅವನದ್ದು. ಅಷ್ಟಿದ್ರೂ.. ನಾನೇನು ಅಲ್ಲ.. ನನಗೇನು ಗೊತ್ತಿಲ್ಲ.. ನಿಮ್ಮುಂದೆ ನಾವ್ಯಾವ ಗಿಡದ ತೊಪ್ಪಲು ಅನ್ನೋ ಮಹಾನ್ ಗುಣ ನಮ್ ರಾಘವನದ್ದು..!! ನಾ ಬ್ಲಾಗ್ ಸೃಷ್ಟಿಸಲು ಏಕ ಭಗೀರಥನಂತೆ ಕೂತು ತಪಸ್ಸು ಮಾಡಿ ನನ್ನ ಮನವೊಲಿಸಿ.. ಇಂದು ಬ್ಲಾಗ್ ಬರೆಯಲು ನನ್ನ ಅಣಿ ಮಾಡಿಹ ರಾಘವನ ಮೇಲಣ ಅಖಂಡ ಪ್ರೀತಿಗಾಗಿ ಈ ಬರಹವನ್ನ ಇದನ್ನ ನಿಮ್ಮೆಲ್ಲರ ಬಳಿ ಕೂತು ಹಂಚಿಕೊಳ್ಳುವ ಮನಸಾಯಿತು.
ರಾಘವನ ಸವಿ ಸವಿ ರಗಳೆಗಳನ್ನ ಓದಲು ಈ ತಾಣಕ್ಕೆ ಭೇಟಿ ಕೊಡಿ. http:// raghavana-ragalegalu. blogspot.com/ ಖಂಡಿತ ನಿಮ್ಮ ಸಮಯ ವ್ಯರ್ಥವಾಗದು ಅನ್ನೋ ಭರವಸೆ ನಾನು ಕೊಡ್ತೀನಿ. ಸಣ್ಣ ಸಣ್ಣ ಕೀಟಲೆ ಮಾತುಗಳಿಂದಲೇ ದೊಡ್ಡ ದೊಡ್ದದ್ದನ್ನ ಅರ್ಥ ಮಾಡಿಸುತ್ತಾ ಸಾಗೋ ಅವನ ಕಲೆ ಅವನಿಗಷ್ಟೇ ಸಿದ್ಧಿ. ಯಾರ ಕಣ್ಣಿಗೂ ಬೀಳದ ಈ ಅನನ್ಯ ಪ್ರತಿಭೆ.. ಸಿಕ್ಕ ನಾಲ್ಕು ಜನರ ಪ್ರೀತಿಗ ಸದಾ ಹಾತೊರೆಯುವ ಅವನ ಹಿಡಿ ಜೀವಕ್ಕೆ.. ಅವನ ಹಂಬಲಕೆ.. ಅವನ ಸಾಗರದಾಳದ ಪ್ರೀತಿಗೆ ನಾನೇನು ಗೀಚಿದರೂ ಕಮ್ಮಿಯೇ..
ನಿಮ್ಮ ಅಮೂಲ್ಯ ಸಮಯ & ಸಹನೆಯ ಓದಿಗೆ ನನ್ನದೊಂದು ಸಲಾಂ. ಬ್ಲಾಗ್ ಕಡೆ ಪುನಃ ಪುನಃ ಬರ್ತಾ ಇರಿ. ಧನ್ಯವಾದಗಳು.
ನಿಮ್ಮ ರಾಘವನ ರಗಳೆಗಳ ಬಗ್ಗೆ ಓದಿ ಬಹಳ ಕುಶಿ ಆಯ್ತು ಪ್ರತಿಯೊಬ್ಬರಿಗೂ ಇಂಥ ರಾಘವ ಸಿಕ್ಕರೆ ನಾವು ಒಂದು ಬ್ಲಾಗ್ ರಚಿಸುವುದರಲ್ಲಿ ಸಂದೇಹವೇ ಇಲ್ಲ :D ನಿಮೆಲ್ಲ ಬರಹಗಳನ್ನು ನೋಡಿದ ನಂತರ ನಮಗೂ ಕೂಡ ನಿಮ್ಮ ರಾಘವನನ್ನು ಬೇಟಿ ಮಾಡುವ ಅಸೆ ಆಗಿದೆ ;) ನಿಮ್ಮ ಬರಹ ಬಹಳ ಅದ್ಬುತವಾಗಿದೆ ..ಧನ್ಯವಾದ
ReplyDeleteGuru ji, neevuu tumbaa "chikka" maat aadidri :D
Deletehehehehehehehe :D
ಪ್ರತಿಯೊಬ್ಬರಿಗೂ ಇಂಥ ರಾಘವ ಸಿಕ್ಕರೆ ನಾವು ಒಂದು ಬ್ಲಾಗ್ ರಚಿಸುವುದರಲ್ಲಿ ಸಂದೇಹವೇ ಇಲ್ಲ :D
Nimma ee maatige kelagade nanna pratikriye ide odi :D
Ondu "Thunta-Saalinalli" idakke uttarisiddene :D
Tumbaa DhanyavaadagaLu :-)
ಗುರುಗಳೇ ನಿಮ್ಮಂತವರ ಹರಕೆ ಹಾರೈಕೆ & ಆರೈಕೆ ನನ್ನಂಥವನನ್ನ ಇಲ್ಲಿಯವರೆಗೂ ತಂದು ನಿಲ್ಲಿಸಿದೆ.. ಈ ಆರೈಕೆ ನಿರಂತರವಿರಲಿ.. ಧನ್ಯವಾದ.. :)
Deleteಈ ಪತ್ರದ ಪ್ರಪ್ರಥಮ ಓದುಗಾರ್ತಿ ನಾನೆ ಅನಿಸುತ್ತೆ.ಹಲವು ತಿಂಗಳುಗಳ ಹಿಂದೆ ನೀನು ಇದನ್ನ ಮೇಲ್ ಮಾಡಿದ್ದೆ.ತುಂಬಾ ತುಂಬಾ ಹಿಡಿಸಿದ ಪತ್ರ.ನನ್ನ ಮಾತುಗಳನ್ನ ರಾಘನ ಬಗ್ಗೆ ನನಗಿರುವ ಅಭಿಮಾನವನ್ನ ನೀನು ಕದ್ದೆ ಎಂಬಷ್ಟು.:-) ಆಗಲೇ ಇದನ್ನ facebook ಅಥವಾ ಅವನ ಬ್ಲಾಗ್ನಲ್ಲಿ ಹಾಕಬಾರದಿತ್ತೆ ಅಂತ ಒಳಗೊಳಗೆ ಮೂಗು ಮುರಿದಿದ್ದೆ.ಇಗಾ ನಿನ್ನ ಬ್ಲಾಗ್ನಲ್ಲಿ ನೋಡಿ ತುಂಬಾ ಖುಷಿಯಾಯ್ತು ಮಾರಾಯ."ಸಿಕ್ಕ ನಾಲ್ಕು ಜನರ ಪ್ರೀತಿಗ ಸದಾ ಹಾತೊರೆಯುವ ಅವನ ಹಿಡಿ ಜೀವಕ್ಕೆ" ನಿನ್ನ ಈ ಸಾಲುಗಳು ಅಕ್ಷರಾಸಹ ನಿಜ.ಗುಬ್ಬಿ ಜೀವದಲ್ಲಿರೋ ದೊಡ್ಡ ತೂಕದ ಹೃದಯ ಅವನದು.ಅವನಿಗೆಷ್ಟು ಭಾರವಾಗುತ್ತಿದೀಯೋ ಗೊತ್ತಿಲ್ಲ.....ನಮಗಂತೂ ಅಲ್ಲಿ ಕೈ ಕಾಲು ಚಾಚಿ ಮಲಗುವಷ್ಟು ನಿರ್ಮಲವಾಗಿ ಕೂರುವಷ್ಟು ಬೇಕಾಬಿಟ್ಟಿ ಓಡಾಡುವಷ್ಟು ಸ್ನೇಹದಂಗಳವ ಪ್ರೀತಿ ಅಭಿಮಾನದಿಂದ ಸಾರಿಸಿಟ್ಟಿದ್ದಾನೆ!:-)ಹಾಗೆ ನಾನು ಬ್ಲಾಗ್ ಶುರು ಮಾಡಲು ಅವನೇ ಕಾರಣವೆಂದು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.ಅವನಿಗೆ ಅವನೇ ಸಾಟಿ ಎನ್ನುವಂತ ಏಕಮಾತ್ರ ಬರಹಗಳನ್ನ ಬ್ಲಾಗ್ ಡೈರಿಯಲ್ಲಿ ದಾಖಲಿಸುತ್ತಿರೋ ನಮ್ಮ ರಾಘನಿಗೆ ಶುಭವಾಗಲಿ.ನಿಮ್ಮಿಬ್ಬರಿಗೂ ಒಲಿದಿರುವ ಈ ವಿಶಿಷ್ಟವಾದ ಯಾರಿಗೂ ಸಾಟಿಯಲ್ಲದ ಅಧ್ವಿತೀಯ ಬರವಣಿಗೆ ಶೈಲಿ ನಿಮ್ಮನ್ನ ಎತ್ತರ ಎತ್ತರಕ್ಕೆ ಕೊಂಡೊಯ್ಯಲ್ಲಿ ಈ ನಿಟ್ಟಿನಲ್ಲಿ ಎಲ್ಲಾ ಹಿರಿಮೆ ಗರಿಮೆಗಳು ನಿಮ್ಮ ಪಾಲಾಗಲಿ...ನಿನ್ನ ರಾಘನ ಕನಸುಗಳೆಲ್ಲಾ ನನಸಾಗಲಿ.:-) ಅಭಿನಂದನೆಗಳು ರಾಘ ಮತ್ತು ಟಾಮ್.:-)
ReplyDeleteನಾ ಏನೇ ಗೀಚಿದರೂ ಮೊದಲ ಬಲಿಪಶುವಾಗ್ತಾ ಇದ್ದ ನಿನ್ನ ಆತ್ಮೀಯ ಓದುಗೆ ಇಂದಲೇ ನಾನಿವತ್ತು ಏನ್ ಬೇಕಾದ್ರೂ ಬರೆಯೋ ಪ್ರಯತ್ನ ಮಾಡ್ಬೋದು ಅನ್ನೋ ವಿಶ್ವಾಸ ಬಂದಿರೋದು..
Deleteನನ್ನ ಬರಹಗಳಿಗೆ ಮೊದಲ ಜಡ್ಜ್ ಆಗಿ ನೀನಿಡುತ್ತಿದ್ದ ಸಲಹೆ & ಮೆಚ್ಚುಗೆಗಳೇ ನನ್ನನ್ನ ಮತ್ತೆ ಮತ್ತೆ ಬರೆಯೋ ಹಾಗೆ ಮಾಡಿದ್ದು..
ಬ್ಲಾಗ್ ಬರೆಯೋಕೆ ರಾಘ ಅರವತ್ತು ಭಾಗ ಕಾರಣ ಆದ್ರೆ ಇನ್ನು ನಲವತ್ತು ಭಾಗದ ಭಾರ ನಿನ್ ತಲೆ ಮೇಲೆ ಬೀಳತ್ತೆ.. ನಿನ್ನ ಬರವಣಿಗೆಯೂ ಏನು ಕಮ್ಮಿ ಇಲ್ಲ.. ಅದನ್ನ ನೋಡಿದ ನಂತರವೇ ನಂಗೆ ಬ್ಲಾಗ್ ಮಾಡುವತ್ತ ಉತ್ಕಟತೆ ಜಾಸ್ತಿ ಆದದ್ದು.. ರಾಘನಿಗೆ ನಾ ಬರೆದು ಹೆಳಲಾಗಿದ್ದು ಇಷ್ಟೇ.. ನೀ ಬರೆಯದೆ ಹೇಳ್ತಿರೋದು ತುಂಬಾ ಇದೆ ಅಂತ ನಂಗೊತ್ತು.. ಈ ಅನುಬಂಧ ಸದಾ ಹೀಗೆ ಇರಲಿ.. :)
This comment has been removed by the author.
ReplyDeleteತುಂಬ ಚೆನ್ನಾಗಿದೆ ನಾಯಕರೆ...:) ನಿಮ್ಮಿಬ್ಬರ ಸ್ನೇಹ ಒಬ್ಬರ ಮೇಲೆ ಒಬ್ಬರು ಇಟ್ಟಿರೋ ಪ್ರೀತಿ ನಿಜಕ್ಕೂ ಸುಪರ್ಬ್...:) ನಿಮ್ಮಷ್ಟೆ ಅಲ್ಲಲ್ಲ ನಿಮ್ಮ ಮನಸ್ಸಿನಷ್ಟೇ ಮುದ್ದಾಗಿದೆ ನಿಮ್ಮ ಬರಹ...:) ನಿಮ್ಮಿಂದ ಇನ್ನು ಹೆಚ್ಚು ಹೆಚ್ಚು ಬರಹಗಳನ್ನ ಅಪೇಕ್ಷಿಸುತ್ತಿರುವ ನಿಮ್ಮ ಪುಟ್ಟ ಅಭಿಮಾನಿ...:)
DeleteShwetha ji... Tumbaa Thanks :-)
DeleteNandenillaa.... Satishanade ellaa.. :D
ಗೌಡ್ರೆ.. ಧನ್ಯವಾದಗಳು.. ಬ್ಲಾಗ್ ಕಡೆ ಬಂದಿದ್ದಕ್ಕೆ..
Deleteನಿಜ ಸ್ನೇಹ ಕೆಲವರನ್ನ ಯಾವ ಪರಿ ಬದಲಾಯಿಸತ್ತೆ ಅನ್ನೋದ್ಕೆ ನಾನು ಒಂದು ಉದಾಹರಣೆಯೇ..
ಪ್ರತೀ ಸಾರಿ ನೀವು ನನ್ನ ಬರಹಗಳನ್ನ ಮೆಚ್ಚೋವಾಗ್ಲೂ ಮುಂದಿನದ್ದು ಇದಕ್ಕಿಂತ ಹೆಚ್ಹು ಚೆನ್ನಾಗಿರಬೇಕು ಅನ್ನಿಸೋ ಉತ್ಕಟತೆಯೇ ನಮ್ಮಣ್ಣ ಈಗ್ಲೂ ಬರೆಯುವಂತೆ ಮಾಡ್ತಿರೋದು.. :)
ರಾಘವ ...ಈ ಹೆಸರು ಈ ಮಧ್ಯೆ ತುಂಬಾ ತುಂಬಾ ಕೇಳಿ ಬರುತ್ತಿದೆ.....ಯಾರು ಈ ಹುಡುಗ??? ಎಲ್ಲರ ಮನ ಗೆದ್ದವ ????? ಮತ್ತೆ ನೋಡಿದರೆ ಈತ ನನ್ನ ತಮ್ಮನೇ........ಯಾರಾದ್ರೂ ಫೇಮಸ್ ಆಗಿಬಿಟ್ರೆ ಅವ್ರು ನಮಗೆ ಹತ್ತಿರದವರು ಅಂತಾ ಹೇಳ್ತಾರಲ್ಲ ಹಾಗೆ ನಾನು ಅಂತ ಅನ್ಕೊಬೇಡಿ ಪಾ....ನಿಜವಾಗಿಯೂ ಅವನು ನನ್ನ ಸಹೋದರ.....ಸುಳ್ಳು ಅನ್ಸಿದ್ರೆ ಅವನ ಹತ್ರಾನೆ ಕೇಳಿ.........ಇನ್ನು ಈ 'ರಾಘವನ ರಗಳೆ ಗಳು'....ನಿಜ, ಈ ತರವಾಗಿ ಅವನೊಬ್ಬನೇ ಬರೆಯಬಲ್ಲ.....ಆತನ ಬರವಣಿಗೆಯಾ ಶೈಲಿಯು ತುಂಬಾ ವಿಭಿನ್ನ.....ಯಾರನ್ನು ಬೇಕಾದರೂ ಮರುಳು ಮಾಡುವಂತಹ , ಎಲ್ಲಾ ವಯಸ್ಸಿನವರಿಗೂ ಖುಷಿ ಕೊಡುವಂತಹ ಬರಹಗಳ ಸರದಾರ...ಆತನ ಬರಹಗಳನ್ನು ಓದಿ ಯಾವುದೇ ಪ್ರತಿಕ್ರೀಯೆ ಯನ್ನು ಪ್ರಕಟಿಸದೆ, ಹಾಗೆ ಖುಷಿಪಟ್ಟು ಹೋಗುವ ಆತನ ಬರಹಗಳ ಬಹು ದೊಡ್ಡ ಅಭಿಮಾನಿಗಳಲ್ಲಿ ನಾನು ಒಬ್ಬ...... ಬೆಳಗಾಂ ಹೋದಾಗ ಒಮ್ಮೆ ಫೋನ್ ಮಾಡಿದ್ದೆ.....ಕೇವಲ ಆನ್ಲೈನ್ ನಲ್ಲೆ ನನ್ನನ್ನು ನೋಡಿದ್ದ ಆತ ಮಾತಾಡಿದ್ದು ತುಂಬಾ ಹಳೆಯ ಪರಿಚಯವಿದ್ದವರಂತೆ.....ಆಡಿದ್ದು ನಾಲ್ಕೇ ಮಾತಾದರೂ ನನ್ನನ್ನು ಯಾವುದೋ ಕಾರಣಕ್ಕೆ ಹೊಗಳಲು ಮಾತ್ರ ಮರೆಯಲಿಲ್ಲ.....ನಿಮ್ ಕನ್ನಡ ಚೆನ್ನಾಗಿದೆ ಅಂತ ಹೇಳಿದ ವ್ಯಕ್ತಿಗಳಲ್ಲಿ ಅವನೇ ಮೊದಲಿಗ ಅನ್ಸುತ್ತೆ.......ಎಲ್ಲರಿಗೂ ಅತೀ ಬೇಗ ಆತ್ಮೀಯವಾಗಿಬಿಡುವ ಈ ರಾಘವ ಸದಾ ಕಾಲ ಹೀಗೆ ಇರಲಿ ಎಂಬ ಹಾರೈಕೆ ನನ್ನದು.....
ReplyDeleteಸತೀಶ್.....ಅಭಿನಂದನೆಗಳು......ಮೊದಲು ನಿಮ್ಮ ಬ್ಲಾಗ್ ನ ಎರಡನೇ ವಿಷಯವಾಗಿ ಯೋಗ್ಯ ವ್ಯಕ್ತಿ ಒಬ್ಬನನ್ನು ಪರಿಚಯಿಸಿದ್ದಕ್ಕೆ.....ಹಾಗೆ ಈ ರಾಘವನ ಬಗ್ಗೆ ನನಗೆ ಎಲ್ಲೂ ಹೇಳಿಕೊಳ್ಳಲಾಗದ ಅಭಿಪ್ರಾಯಗಳನ್ನು ಪ್ರಕಟಿಸುವ ಅವಕಾಶ ಮಾಡಿಕೊಟ್ಟಿದ್ದಕ್ಕೆ.....ನಿಮ್ಮ ಸ್ನೇಹ ಅಮರವಾಗಿರಲಿ.....
ಅಶೋಕಣ್ಣ.. ನಿಮ್ಮದಷ್ಟೇ ಅಲ್ಲ ಇನ್ನು ಅದೆಷ್ಟು ಜನರ ಬಾಯಿ ಕಟ್ಟಿ ಹಾಕಿದಾನೋ ಗೊತ್ತಿಲ್ಲ ರಾಘ.. ಒಳ್ಳೆಯ ರಾಗದಲ್ಲೇ ಗುಣಗಾನ ಮಾಡ ಬಹುದಾದಂತ ಚರಿತ್ರೆ ಅವನದು.. ನಾ ಬ್ಲಾಗ್ ಮಾಡೋಕೆ ಮೂಲ ಕಾರಣನಾದ ಅವನಿಗೆ ಆ ಪತ್ರದ ಮೂಲಕ 1 ಸಣ್ಣ ಧನ್ಯವಾದ ಹೇಳೋ ಪ್ರಯತ್ನವಷ್ಟೇ ಅದು.. ಅದು ಕೂಡ ಐದು ತಿಂಗಳ ಹಳೇದು.. ಈಗ ಬರೆದ್ರೆ.. ಅನ್ಯಾಯವಾಗಿ ಅವನಿಗೆ ಅಭಿಮಾನಿಗಳು ಇನ್ನೂ ಜಾಸ್ತಿ ಆಗೋ ಅಪಾಯವುಂಟು.. ಅದ್ಕೆ ಸಹಿಸ್ಕೊಂಡಿದಿನಿ.. ಪ್ರತಿಕ್ರಿಯೆಗೆ ಧನ್ಯವಾದಗಳು ಅಶೋಕಣ್ಣ.. :) :)
Deleteನಾಲ್ಕು "wall " ಗಳ ಮಧ್ಯೆ ಇರಬೇಕಾದ ವಿಷಯಗಳನ್ನ ನೀನು facebook "wall " ಮೇಲೆ ಇಡೋ ಅವಶ್ಯ"ಕಥೆ" ಇತ್ತಾ...?
ReplyDeleteಮೈತುಂಬಾ ಬಟ್ಟೆ ಹಾಕೊಂಡಿದ್ರೂ ಕೂಡಾ, ಮನೆ ರೂಂ ನಿಂದಾ, ಮನೆ hall ಗೂ ಬರೋಕೂ ನಾಚಿಕೊಳೋ ನನ್ನನ್ನ ನಡುಬೀದಿಯಲ್ಲಿ "ವಿವಸ್ತ್ರನನ್ನಾಗಿಸಿ" ನಿಲ್ಲಿಸುವ ಹುಂಬತನ ಬೇಕಿತ್ತಾ...?
ನನ್ ಬಗ್ಗೆ ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ ಕೂಡಾ ನೀನ್ ಮಾಡಿರೋ ಈ ರಗಳೆಯಿಂದ ನಂ ಕೆನ್ನೆ ಎಷ್ಟೊಂದು ಕೆಂಪಾಗಿದೆ ಅಂತ ನಿನಗಿನ್ನೂ ಸ್ಪಷ್ಟ ಐಡಿಯಾ ಸಿಕ್ಕಿರಲ್ಲಾ ಬಿಡು.
{ಜೋರು ನಗುವಿನೊಂದಿಗೆ} ನನ್ First -night ಬಂದಾಗಲೂ ಕೂಡಾ ನಾನ್ ಇಷ್ಟೊಂದು ನಾಚ್ಕೊಳಲ್ಲಾ ನೋಡು. :D ಅಷ್ಟೊಂದು ನಾಚಿಕೆ ಆಗ್ತಾ ಇದೆ ನಂಗೆ. :/ ಅದಕ್ಕೆ ನಾನು ೩ ದಿನಗಳ ಮಟ್ಟಿಗೆ ನನ್ನ FACEBOOK ಅಕೌಂಟ್ ನ Deactivate ಮಾಡಬೇಕಾಯ್ತು :-(
Well , ಆವತ್ತು ನಿನ್ನ ಈ mail ನೋಡಿ, ನಾನೆಷ್ಟು ಸಂಭ್ರಮಿಸಿದ್ದೆ, ನಮ್ಮಿಬ್ಬರ ನಡುವೆ ಏನೆಲ್ಲಾ ಮಾತು ಕತೆ [?] ಗಳಾಗಿದ್ವು ಎಲ್ಲಾ ಮತ್ತೆ ಸ್ಮೃತಿಪಟಲದ ಮೇಲೆ ಹಾಯ್ದುಹೊಗುವಂತೆ ಮಾಡಿಬಿಟ್ಟೆ..... ನಾವಿಬ್ರು ಸೇರೋಕೆ ಪ್ರಮುಖ ಕಾರಣಳಾದ "ವೈಶೂ" ಗೆ ನಾವಿಬ್ರು ಎಷ್ಟ್ ಥ್ಯಾಂಕ್ಸ್ ಹೇಳಿದ್ರೂ ಕೂಡಾ ೧-೨ ಥ್ಯಾಂಕ್ಸ್ ಹಂಗೆ ಸೈಡಲ್ ಬ್ಯಾಲೆನ್ಸ್ ಉಳ್ಕೊಂಡ್ಬಿಡುತ್ ನೋಡು.
ನಿನ್ ಬ್ಲಾಗ್ ಹುಟ್ಟೋಕೆ ನಾನ್ ಹೇಗೆ ಕಾರಣ ಅಂತಾ ನನಗಂತೂ ತಿಳಿತಿಲ್ಲಪ್ಪಾ :p
ಇದೊಂಥರ ಹೇಗಿದೆ ಅಂದ್ರೆ, " ಮದುವೆ ಆದ್ಮೇಲೆ ಮುದ್ದಾದ ಮಗುವಿಗೆ ಜನ್ಮ ಕೊಡೊ ವರ, ಕ್ರೆಡಿಟ್ ನೆಲ್ಲಾ ಪುರೋಹಿತನಿಗೆ ಕೊಟ್ನಂತೆ...!! lol :D ಯದ್ವಾ-ತದ್ವಾ ತಪ್ಪಾಗುತ್ತೆ ಕಣೋ :D ಪುರೋಹಿತ ಇಲ್ದೆನೂ ಮದುವೆ ಆಗುತ್ತೆ... ಬಿಟ್ರೆ ಮಕ್ಳೂ ಆಗುತ್ವೆ ;-) :D ಗ್ಯಾಪಲ್ ನಮ್ದೆನಪ್ಪಾ.? :P
ನಿನ್ನ ಈ ಇಡೀ ಬರಹದ ಪ್ರತಿಯೊಂದೂ ಸಾಲುಗಳು ಕೂಡಾ," ನನಗೆ ಇದುವರೆಗೂ ಸಂದ ಅತೀ ದೊಡ್ಡ ಗೌರವ ... At the same time ಅತೀ ದೊಡ್ಡ ಮುಜುಗರ ಅಂತಾ ಹೇಳಲು ನಾನು, ತುಂಬಾ ಖುಷಿ....... At the same time ತುಂಬಾ ಖೇದ ವ್ಯಕ್ತಪಡಿಸುತ್ತೇನೆ ..... ನನ್ ಬಾಯಿಗಿಷ್ಟ್ ಮಣ್ಣ ಹಾಕಾ :P
& ವೈಶೂ, ಈ ಪೋಸ್ಟ್ ಹುಟ್ಟೋಕೆ ಪ್ರಮುಖ ಕಾರಣ ನೀನೆ..!! ಹೀಗಿದ್ದು ಕೂಡಾ ನೀನು ನನ್ನನ್ನ ಹೊಗಳಿದ್ದು,....... ಕುಮಾರಸ್ವಾಮಿ ಯಡ್ಡಿ ಗೆ, ಖುರ್ಚಿ ಬಿಟ್ಟು ಕೊಡದಷ್ಟೇ ದೊಡ್ಡ ತಪ್ಪು.
ನಾನೇನಾದ್ರು ತಲೆ ಇಲ್ದೆ ಅಷ್ಟೋ ಇಷ್ಟು ಗೀಚಿದ್ರೆ ಅದಕ್ಕೆ ನೀನು ಕೂಡಾ ಪ್ರಮುಖ ಕಾರಣ ಆಗ್ತಿಯ ನೆನಪಿರಲಿ :P
.
Yesssss Ashu bro, ನೀವು ಹೇಳಿದ್ದೆಲ್ಲಾ ಇನ್ನೂ ಚೆನ್ನಾಗ್ ನೆನಪಿದೆ :-) ಈ ಸತೀಶನಿಗಂತೂ ಬುದ್ಧಿ ಇಲ್ಲಾ .... ನೀವು ನನ್ನನ್ನ ಅತೀಯಾಗಿ ಹೊಗಳುವುದನ್ನ ನೋಡಿದ ಮೇಲೆ ಕಟ್ಟಕಡೆಯದಾಗಿ ನಾನ್ ಹೇಳುವುದಿಷ್ಟೇ........
.
"ನಿಮ್ಮ ಪ್ರೀತಿಗೆ, ಅದರ ರೀತಿಗೆ ಪೆನ್ನ ಹನಿಗಳೇ ಕಾಣಿಕೆ" :D
ರಾಘ ಗಂಧದ ಸುಗಂಧವನ್ನ ತೇಯುವ ತನಕ ಮುಚ್ಚಿಡಬಹುದು.. ತೇಯುವಾಗ ಅಲ್ಲ..
Deleteನಿನ್ನ ಜೊತೆ ಸ್ನೇಹಿತ ನಾಗಿ ಪಳಗಿದಮೆಲೇನೆ ಗೊತ್ತಾಗಿದ್ದು ನೀನೆಂಥಾ ಅಪೂರ್ವ ಗಂಧ ಅಂತ..
ಅದ್ಕೆ ನಾಲ್ಕು ಜನರ ಮುಂದೆ ನಿನ್ನ ವಿಚಾರವನ್ನ ತೇಯ್ದದ್ದು..
ನಾಚಿಕೆ & ಮುಜುಗರ ಒಂದು ಇಲ್ದೆ ಹೋಗಿದ್ದಿದ್ರೆ.. ನೀನೆನಾಗಿರ ಬಹುದಿತ್ತು ಅನ್ನೋ ಕಲ್ಪನೆ ನಿನಗೂ ಸಿಗಲಿಕ್ಕಿಲ್ಲ... ನಂಗೂ ಹೊಳೀತಿಲ್ಲ..
ನಿನ್ನ ಬಗ್ಗೆ ಪೋಸ್ಟ್ ಹಾಕಿದೆ ಅಂತ ಫೇಸ್ಬುಕ್ ಖಾತೆ ನಾಶ ಮಾಡಿದಾಗಲೇ ತಿಳ್ಕೊಬೇಕು ನೀನೆಂಥಾ ನಾಚಿಕೆ ಮುಳ್ಳು.. ಅಂತ..
ನಿನ್ನಿಂದ ಬಹಳಷ್ಟು ಉತ್ಸಾಹಿತನಾದ ನಾನು ಅದೇ ಉತ್ಸಾಹದಲ್ಲೇ ಇಷ್ಟು ಮಾಡಿದ್ದು ಬಿಟ್ರೆ ಇದೇನು ನಾ ಮಾಡಿದ ಸನ್ಮಾನ ಅಲ್ಲ.. ಅದನ್ನ ಹಾಗೆ ಸ್ವೀಕರಿಸಿದ್ದು ನಿನ್ನ ದೊಡ್ಡತನ..
ನಾನೂ ಬ್ಲಾಗ್ ಮಾಡಿ ಆಯಿತು.. ಇನ್ನೇನು ನಿನ್ನಾಸೆ ಈಡೇರ್ತಲ್ಲ..
ಈಗ ನೀ ಕೂಡ ನಿನ್ನ ಬ್ಲಾಗ್ ನಲ್ಲಿ ಹೊಸ ಹೊಸ ಪೋಸ್ಟ್ ಗಳನ್ನ ಹಾಕೋದನ್ನ ಮುಂದುವರೆಸಬೇಕಾಗಿ ವಿನಂತಿ..
ಮದನ ಮೋಹನ ನಿದ್ದೆ ಮಾಡ್ತಿದಾನೆ.. ನಮ್ ಹೊಲ ಬತ್ತಿದೆ ಅಂತ ಕಥೆ ಎಲ್ಲ ಹೇಳಿದ್ರೆ ಸರಿ ಇರಲ್ಲ..
ನಿನ್ನ ಬರಹಗಳ ಮೇಲಿನ ಹೊಟ್ಟೆ ಉರಿ ಇಂದಲೇ ನಾನು ಬ್ಲಾಗ್ ಮಾಡಿದ್ದು ನೆನಪಿರಲಿ..
Welcome Back Soon.. :)
ಮುದ್ದಣ್ಣ ಮನೋರಮೆಯ ಸಲ್ಲಾಪ ಓದಿದಂತ ಒಂದು ಗಾಢ ಅನುಭವವಾಯಿತು...ಗುಲಗಂಜಿಯ ತೂಕದಷ್ಟಿಂದ ಶುರುವಾಗುವ ಸ್ನೇಹ...ಕಡೆಗೆ ಚಾಮುಂಡಿ ತನ್ನ ನಾಲಿಗೆಯನ್ನು ಜಾಗಕ್ಕೆ ಹರವಿದಂತೆ ಸ್ನೇಹದ ಲೋಕ ತೆರೆದುಕೊಳ್ಳುತ್ತಾ ಹೋಗುತ್ತದೆ..ಈ ಸ್ನಿಗ್ದ ಅನುಭವ ನಿಮ್ಮ ಲೇಖನದ ಅಂತರಂಗದಲ್ಲಿ ಅವಿತು ಕೂತಿದೆ..ಸೊಗಸಾಗಿದೆ ಅಭಿನಂದನೆಗಳು ಸತೀಶ್ ಮತ್ತು ರಾಘವ ಚಂದ್ರ..
ReplyDelete
Deleteಶ್ರೀ ಸಾರ್.. ಕಾಮೆಂಟ್ ಗಳನ್ನ ಹಿಂಗೆ ಮಾಡ್ಬೇಕು ಅಂತ ಕಲಿತದ್ದೇ ನಿಮ್ಮಿಂದ.. :)
ನಿಮ್ಮೆಲ್ಲರ ಬ್ಲಾಗ್ ಬಳಗದ ಮೇಲಿನ ಅಸೂಯೆ ಇಂದಲೇ..
ಅದರೊಳಗೆ ನಾನೂ ಒಬ್ಬನಾಗ ಬೇಕೆಂಬ ಹಂಬಲ ದಿಂದಲೇ..
ಎಷ್ಟು ಸಾಧ್ಯವೋ ಅಷ್ಟು ಬೇಗ ಬಂದಿದೀನಿ..
ಪ್ರತಿಕ್ರಿಯೆಗೆ ಧನ್ಯವಾದಗಳು ಸಾರ್..
ಸಲಹೆ ಸೂಚನೆಗಳಿಗೆ ನನ್ನ ಮನೆ & ಮನ ಯಾವತ್ತಿಗೂ ಮುಕ್ತ..
ನನಗದು ಅವಶ್ಯಕ ಕೂಡ.. :) :)
ಜೊತೆಗಾರ ಸಮಕಾಲೀನ ಸಾಹಿತಿಯ ಬಗ್ಗೆ ಅತ್ಯುತ್ತಮ ಬರಹ ಇದು. ರಾಘವ ಚಂದ್ರ ಅವರ ಬಗೆಗೆ ನನಗೆ ಈಗ ತಿಳಿಯಿತು. ಅವರ ಬರಹಗಳನ್ನು ಓದುತ್ತೇನೆ.
ReplyDeleteಒಳ್ಳೆಯ ಸುಲಲಿತ ಶೈಲಿ ನಿಮಗೆ ಒಗ್ಗಿದೆ. ಹೊಸ ಬ್ಲಾಗಿನ ಹೊಸತನ ಮಮಗೂ ಚೈತನ್ಯ ತಂದಿತು.
ಬದರೀ ಸರ್..
Deleteನನ್ನ ಬ್ಲಾಗ್ ಮನೆಗೆ ಸ್ವಾಗತ.. :)
ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯ್ತು..
ಪ್ರತಿಯೊಬ್ಬರ ಬರಹಗಳನ್ನೂ ಮುಕ್ತ ಮನಸ್ಸಿನಿಂದ ಓದುವ..
ಮತ್ತು ಅದರ ಬಗ್ಗೆ ಹಲವರಿಗೆ ತಿಳಿಸುವ ನಿಮ್ಮತನಕ್ಕೊಂದು ಸಲಾಂ.
ಸಲಹೆ ಸೂಚನೆಗಳಿದ್ರೆ ಮುಕ್ತವಾಗಿ ತಿಳಿಸಿ..
ಪ್ರತಿಕ್ರಿಯೆಗೆ ಧನ್ಯವಾದಗಳು ಸಾರ್..
ಈ ಪತ್ರವನ್ನ ನಂಗೂ ಕೂಡ ಮೇಲ್ ಮಾಡಿದ್ದೆ ನೀನು .ಆಗ ನಾನು ಓದಿ ಒಳಗೊಳಗೆ ಕುಶಿಗೊಂಡು ಪ್ರತಿಕ್ರಿಯಿಸದೇ ಸುಮ್ಮನಾಗಿದ್ದೆ.
ReplyDeleteನಿಮ್ಮಿಬ್ಬರ ಗಾಢ ಮೈತ್ರಿ , ವಿನಾಕಾರಣ ಪ್ರೀತಿ ,ಮತ್ತು ಅವನ ಬರವಣಿಗೆಯ ಮೇಲೆ ನಿನಗಿರುವ ಮೋಹ ಮತ್ತು ಹೊಟ್ಟೆಕಿಚ್ಚು ಎಲ್ಲವೂ
ಇಲ್ಲಿ ಸಾದರಗೊಂಡಿವೆ...
ನನಗೂ ರಾಘವನ ಬಗ್ಗೆ ವಿನಾಕಾರಣ ಮೈತ್ರಿಯಿದೆ ..ನಿರಾಕಾರಣ ಪ್ರೀತಿಯಿದೆ ..ಅಂಗೈ ಅಗಲದಲ್ಲಿ ಆಕಾಶದ ಪ್ರೀತಿ ,ವಿಶ್ವಾಸ ತೋರುವದು ಅವನ ದೊಡ್ಡಗುಣ.
ಅವನ ಬರಹಗಳೋ..ಹೃದಯ ಮುಟ್ಟಿ ಅಂತರ್ದಾನಗೊಳ್ಳುವ ಪೈಕಿ ..ನನ್ನನ್ನ ಸಕಾರಣವಿಲ್ಲದೇ ಹೊಗಳಿ ,ನೀನು ಹಂಸಲೇಖ ಪಾರ್ಟ್ ೨ ಅಂತ ಹೇಳಿ ಕಿವಿಗೆ
ಚೆಂಡು ಹೂವು ಮೂಡಿಸುತ್ತಾನೆ..( ನಗಬೇಕಾಗಿ ವಿನಂತಿ ) ......ಗೊತ್ತು ನೀವು ನಕ್ಕಿರಲ್ಲ.....!
ಸತೀಶ ಮತ್ತು ರಾಘವ ನನ್ನ ಮೇಲೆ ಬೀರಿದ ಪ್ರಭಾವ ಅಪಾರ...ನಿಮ್ಮ ಬರಹಗಳನ್ನ ವಿಶ್ಲೇಷಿಸುವದಕ್ಕಿಂತ ಸುಮ್ಮನೇ ಓದಿಕೊಳ್ಳುತ್ತೇನೆ..ಅಲ್ಲಿ ನೀವೇ ಇದ್ದಂತೆ ..ತುಸು ಹೊತ್ತು ಎದುರಿಗಿದ್ದು ಕಾಡು ಹರಟೆ ಹರಟಿದಂತೆ ಭಾಸವಾಗುತ್ತದೆ. ಗಾಳಿಗೆ ಮುಖವೊಡ್ಡಿದಾಗ ಮಂದಾನಿಲ ತಣ್ಣಗೆ ಮುಖಕ್ಕೆ ರಾಚಿದಂತೆ..
ಮತ್ತೆ ಮತ್ತೆ ರಾಗ್ಯನ ಬಗ್ಗೆ ಹೇಳೂದ್ ಆದ್ರ " ಅವ ಸಂತ ಅಲ್ಲ ವಸಂತ.."
ಏ ರಾಗ್ಯ- ಗೂಗ್ಯ ಏಟರ್ ಬರೀತಿಲೆ ಎಪ್ಪ...ಪೆನ್ನು ..ಅದು ಗನ್ನಲ್ಲೋ ಸಿವ ..ಪಟ-ಪಟ ಅಂತ ತುಪಾಕಿ ಹಾರ್‍ಸಾಕ.... ತಲ್ಯಾಗ ಎನ್ ತುಂಬ್ಕೊಂಡಿಯೋ ಪರಮಾತ್ಮ......ಭಾಳ ವರ್ಸ ಗುಂಡ್ ಕಲ್ ಇದ್ದಂಗ್ ಇರೋ ಮಾರಾಯ............
ಅರುಣ್ ಈ ನಡುವೆ ನನ್ನನ್ನ ತುಂಬಾ ಇಂಪ್ರೆಸ್ ಮಾಡಿ ಹಾಳು ಮಾಡಿರೋ ಗಂಡು ಹೈಕಳಲ್ಲಿ ನೀನು ಒಬ್ಬ ಅನ್ನೋಕೆ ನನಗೆ ನಾಚ್ಕೆ ಇಲ್ಲ ಅನ್ನೋದ್ಕೆ ಹೆಮ್ಮೆ ಪಡ್ತೀನಿ...
Deleteಮಿಕ್ಕಿದ್ದೆಲ್ಲ ಫೋನಲ್ಲಿ ಹೇಳಿ ಆಗಿದೆ.. ಮಿಕ್ಕಿರೋದನ್ನ ಮತ್ತೊಮ್ಮೆ ಹೇಳ್ತೀನಿ.. :) :)
ನಿನ್ನ ಬ್ಲಾಗಿನ ಅಪೇಕ್ಷೆ ಮತ್ತು ನಿರೀಕ್ಷೆ ನಮ್ಮಲ್ಲಿ ಅದಮ್ಯವಾಗಿದೆ ಅನ್ನೋದು ನೆನಪಿರಲಿ..
ನಿನ್ನ ಬರಹಗಳ ಗಂಧ ಮತ್ತೂ ನಾಲ್ಕೂ ಜನಕ್ಕೆ ತಿಳಿಯಲಿ.. ಆದಷ್ಟು ಬೇಗ ಬ್ಲಾಗ್ ಕಡೆಗೆ ಬರಬೇಕಾಗಿ ವಿನಂತಿ.. :)